ಅಂತಿಮ ಕಾನೂನು ಪದವಿ ವಿದ್ಯಾರ್ಥಿಗಳಿಗೆ ವಿದಾಯ ಕೂಟ ಕಾರ್ಯಕ್ರಮ

ಕೆ.ವಿ.ಜಿ. ಕಾನೂನು  ಮಹಾವಿದ್ಯಾಲಯ ಸುಳ್ಯ- ಅಂತಿಮ ಕಾನೂನು ಪದವಿ ವಿದ್ಯಾರ್ಥಿಗಳಿಗೆ ವಿದಾಯ ಕೂಟ ಕಾರ್ಯಕ್ರಮ

ಪ್ರಾಮಾಣಿಕತೆಯೇ ಗೆಲುವಿನ ಮೆಟ್ಟಿಲು ;- ಪ್ರೊ. ಉದಯಕøಷ್ಣ.ಬಿ

ಜೀವನದಲ್ಲಿ ವಿದ್ಯಾರ್ಥಿಗಳು ಪ್ರಾಮಾಣೆಕತೆ, ಶಿಸ್ತು, ಸಹನೆ ಮತ್ತು ನಿರಂತರ ಅಭ್ಯಾಸವನ್ನು ಮೈಗೂಡಿಸಿಗೊಂಡರೆ ತಮ್ಮ ವøತ್ತಿ ಜೀವನದಲ್ಲಿ ಉನ್ನತಿಗೇರಲು ಸಾಧ್ಯ ಎಂದು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಉದಯಕøಷ್ಣ. ಬಿ ಹೇಳಿದರು. ಅವರು ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ ಸುಳ್ಯ ಇದರ 2021-22ನೇ ಸಾಲಿನ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ದಿನಾಂಕ 16-09-2022 ರಂದು ವಿದಾಯ ಕೂಟ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ .ಬಿ ಇವರು ಬೀಳ್ಕೊಡಲ್ಪಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.