ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ
“ವಿದ್ಯಾಭ್ಯಾಸದ ಜೊತೆ ಸಂಸ್ಕಾರವನ್ನು ರೂಢಿಸಿಕೊಳ್ಳಿ” – ಪ್ರಸನ್ನ ಎನ್. ಹೆಚ್.
ಕೆ. ವಿ. ಜಿ. ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ 09-12-2022 ದಂದು 2022-23 ಸಾಲಿನ ಪ್ರಥಮ ವರ್ಷದ ಬಿ.ಎ.,ಎಲ್.ಎಲ್.ಬಿ. ಮತ್ತು ಎಲ್.ಎಲ್.ಬಿಗೆ ಸೇರ್ಪಡೆಗೊಂಡ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ಇವರು ವಹಿಸಿದ್ದರು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಮತ್ತು ಮಾತುಗಾರರಾಗಿ ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜು, ಸುಳ್ಯ ಇಲ್ಲಿನ ಹಿರಿಯ ಉಪನ್ಯಾಸಕರಾದ ಪ್ರಸನ್ನ ಎನ್. ಎಚ್. ಇವರು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ ಬಿ., ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ ಹೆಚ್. ಎಸ್. ಉಪಸ್ಥಿತರಿದ್ದರು.





ವಿದ್ಯಾರ್ಥಿನಿಯರಾದ ಕವನ ಮತ್ತು ಅಂಜಲಿ ಪ್ರಾರ್ಥಿಸಿ, ವಿದ್ಯಾರ್ಥಿ ಶ್ರೀರಾಗ್ ಟಿ. ಸ್ವಾಗತಿಸಿ, ವೆಂಕಟಕøಷ್ಣ ಶರ್ಮಾ ಬಿ. ಕೆ. ವಂದಿಸಿದರು. ವಿದ್ಯಾರ್ಥಿನಿ ನಿಶಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋದಕ, ಬೋದಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.