

ಕಾನೂನು ಮಾಹಿತಿ ಕಾರ್ಯಗಾರ
ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಕಾನೂನು ಸಲಹಾ ಸಮಿತಿಯ ವತಿಯಿಂದ ಸುಳ್ಯದ ಶ್ರೀ ಶಾರದ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಮಾಹಿತಿ ಕಾರ್ಯಗಾರವು ದಿನಾಂಕ 13-01-2023ರಂದು ನಡೆಯಿತು. ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ 4ನೇ ವರ್ಷದ ಕಾನೂನು ವಿದ್ಯಾರ್ಥಿನಿ ವøಂದಾಪ್ರಕಾಶ್ “ಬಾಲಕಾರ್ಮಿಕ ನಿರ್ಮೂಲನ ಕಾಯ್ದೆ” ಮತ್ತು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿನಿ ರೇವತಿ. ಪಿ. ಎಮ್ ರವರು “ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ” ಎಂಬ ವಿಷಯಗಳ ಬಗ್ಗೆ ಕಾನೂನು ಮಾಹಿತಿ ನೀಡದರು. ಕಾನೂನು ಉಪನ್ಯಾಸಕ ಜಯರಾಮ್. ವೈ ಪ್ರಚಲಿತ ಕಾನೂನು ಕುರಿತು ಮಾರ್ಗದರ್ಶನ ಮಾಡಿದರು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದು, ಕಾರ್ಯಗಾರದ ಸದುಪಯೋಗ ಪಡೆದುಕೊಂಡರು.