![Annual sport meet 2023 (4)](https://kvglaw.org/wp-content/uploads/2023/01/Annual-sport-meet-2023-4-768x512.jpeg)
![Annual sport meet 2023 (1)](https://kvglaw.org/wp-content/uploads/2023/01/Annual-sport-meet-2023-1-768x512.jpeg)
![Annual sport meet 2023 (2)](https://kvglaw.org/wp-content/uploads/2023/01/Annual-sport-meet-2023-2-768x512.jpeg)
![Annual sport meet 2023 (3)](https://kvglaw.org/wp-content/uploads/2023/01/Annual-sport-meet-2023-3-768x576.jpeg)
ಕೆ.ವಿ.ಜಿ ಕಾನೂನು ಮಹಾವಿದ್ಯಾಲದಲ್ಲಿ ದಿನಾಂಕ 19-01-2023ರಂದು ವಾರ್ಷಿಕ ಕ್ರೀಡೋತ್ಸವವು ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಮೇಶ್ವರ ಪದವಿ ಕಾಲೇಜಿನ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ. ತುಕರಾಮ್ ಗೌಡ ಕ್ರೀಡೋತ್ಸವವನ್ನು ಉದ್ಘಾಟಿಸಿ, ಶಿಕ್ಷಣ ಮತ್ತು ಸಂಸ್ಕಾರ ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಮತ್ತು ಯೋಗಾಸನ ಪೂರಕ ಎಂದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದ ಇವರು ವಹಿಸಿ, ಮಾತನಾಡುತ್ತಾ ದೈನಂದಿನ ಜೀವನದಲ್ಲಿ ಮಾನಸಿಕ ಮತ್ತು ದೈಹಿಕ ಸಾಮಥ್ರ್ಯ ಬಹುಮುಖ್ಯ, ನಮ್ಮ ಗುರಿ ಸದಾ ಸಾಧನೆಯತ್ತಇರಬೇಕು ಆದಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಅತೀ ಮುಖ್ಯ ಎಂದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಉದಯಕೃಷ್ಣ. ಬಿ, ದೈಹಿಕ ಶಿಕ್ಷಣ ನಿರ್ದೇಶಕರುಗಳಾದ ಮಿಥನ್. ಎಸ್ ಮತ್ತು ಲೆಫ್ಟಿನೆಂಟ್ ಸೀತಾರಾಮ್. ಎಮ್. ಡಿ ಹಾಗೂ ಕಾಲೇಜಿನ ಕ್ರೀಡಾ ಸಂಯೋಜಕರಾದ ಲಕ್ಷ್ಮೀಕಾಂತ್. ಕೆ. ಎಲ್. ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅಂಜಲಿ ಮತ್ತು ಕವನ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಪ್ರೊ. ಉದಯಕೃಷ್ಣ.ಬಿ, ಸ್ವಾಗತಿಸಿ, ಉಪನ್ಯಾಸಕ ರಾಜೇಂದ್ರ ಪ್ರಸಾದ್. ಎ ವಂದಿಸಿದರು. ಉಪನ್ಯಾಸಕಿ ರಶ್ಮಿ. ಹೆಚ್ ಕಾರ್ಯಕ್ರಮ ನಿರೂಪಿಸಿದರು.