“ESPERANZA 23” College Annual Day Celebration

ಕಾನೂನು ಶಿಕ್ಷಣದ ಕ್ಷೇತ್ರ ವಿಸ್ತಾರವಾದದ್ದು:- ಡಾ.ಕೆ.ವಿ. ಚಿದಾನಂದ

ಸುಳ್ಯದ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ದಿನಾಂಕ ೨೨-೦೮-೨೦೨೩ ರಂದು ೩೩ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಿತು. ಈ ಸಮಾರಂಭದ ಸಭಾಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ),ಸುಳ್ಯ ಇದರ ಅಧ್ಯಕ್ಷರಾದ ಡಾ.ಕೆ.ವಿ. ಚಿದಾನಂದರವರು ವಹಿಸಿ ಮಾತನಾಡಿ ಕಾನೂನು ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ಪೂಜ್ಯ ಡಾ. ಕೆ.ವಿ.ಜಿಯವರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕಾನೂನು ಶಿಕ್ಷಣಕ್ಕೆ ಬಹಳ ಬೇಡಿಕೆಯಿದ್ದು ವಿಷಯದ ಆಳವಾದ ಅಧ್ಯಯನ, ಸಮಯಪ್ರಜ್ಞೆ, ವಿನಯತೆ, ಶ್ರದ್ಧೆ, ಶಿಸ್ತು, ಮೊದಲಾದ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ವೈದ್ಯಕೀಯ ಕ್ಷೇತ್ರದಲ್ಲೂ ಕಾನೂನಿನ ಬಳಕೆ ಬಹಳಷ್ಟು ಇದೆ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ, ಕೆ.ವಿ.ಜಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್. ಡಿ.ವಿ, ಅವರು ಮಾತನಾಡಿ ಕಾನೂನು ಶಿಕ್ಷಣಕ್ಕೆ ವಿಪುಲ ಅವಕಾಶವಿದ್ದು, ವಿದ್ಯಾರ್ಥಿಗಳು ಜ್ಞಾನ ಸಂಗ್ರಹದ ಜೊತೆಗೆ ಅದರ ಪರಿಣಾಮಕಾರಿ ಬಳಕೆಮಾಡಿ ಸಾಧನೆ ಗೈಯಬೇಕು. ಶಿಸ್ತು, ಕಠಿಣ ಪರಿಶ್ರಮ ಯಶಸ್ಸಿನ ಕೀಲಿಕೈ ಎಂದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಶ್ರೀ ಹೇಮನಾಥ್ ಕೆ.ವಿ, ಪ್ರಾಂಶುಪಾಲರಾದ ಉದಯಕೃಷ್ಣ.ಬಿ, ವಿಧ್ಯಾರ್ಥಿ ಕ್ಷೇಮಾಧಿಕಾರಿ ಶ್ರೀಮತಿ ಟೀನಾ ಹೆಚ್.ಎಸ್ ಹಾಗೂ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಿಲನ್. ಬಿ.ಕೆ, ಪದಾಧಿಕಾರಿಗಳಾದ ವೆಂಕಟಕೃಷ್ಣ ಶರ್ಮಾ. ಬಿ.ಕೆ, ಲತಾಕುಮಾರಿ. ಕೆ.ಡಿ ಉಪಸ್ಧಿತರಿದ್ದರು. ವಿದ್ಯಾರ್ಥಿನಿಯರಾದ ರಮ್ಯ ಎ.ಎಸ್, ಸುಶ್ಮಿತಾ ಬಿ.ಎಂ ಮತ್ತು ಚಂದನ. ಪಿ. ಎಸ್ ಪ್ರಾರ್ಥಿಸಿದರು. ವಿಧ್ಯಾರ್ಥಿ ಕ್ಷೇಮಾಧಿಕಾರಿ ಶ್ರೀಮತಿ ಟೀನಾ ಹೆಚ್.ಎಸ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ಉದಯಕೃಷ್ಣ.ಬಿ ಕಾಲೇಜಿನ ವರದಿಯನ್ನು ವಾಚಿಸಿದರು. ಉಪನ್ಯಾಸಕಿ ರಶ್ಮಿ. ಹೆಚ್. ಎಸ್ ಅತಿಥಿಗಳನ್ನು ಪರಿಚಯಿಸಿದರು. ದತ್ತಿನಿಧಿ, ಕಲಿಕೆ, ಸಾಂಸ್ಕçತಿಕ, ಕ್ರೀಡಾ ಸ್ವರ್ಧಾ ವಿಜೇತರ ಪಟ್ಟಿಯನ್ನು ಉಪನ್ಯಾಸಕಿಯರಾದ ಕಲಾವತಿ. ಎಂ, ನಯನ. ಪಿ.ಯು ಮತ್ತು ರಚನಾ. ಕೆ ವಾಚಿಸಿದರು.

ಉಪನ್ಯಾಸಕಿಯರಾದ ಬೇಬಿ ವಿದ್ಯಾ. ಪಿ.ಬಿ ಮತ್ತು ಉಷಾ.ಸಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಆರ್ಚನಾ.ಆರ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕçತಿಕ ವೈವಿಧ್ಯ ನಡೆಯಿತು.